” ತು೦ಟಾಟ” ದ ಲೇಖನಗಳ ” ಸರಣಿ”

ಸಾಹಿತ್ಯ | ಕಾರ೦ಜಿ
A Blog Paper For Literature…

Presents

” ತು೦ಟಾಟ” ದ ಲೇಖನಗಳ ” ಸರಣಿ”
ಶಾಲೆ-ಕಾಲೇಜಿನ ಹಾಸ್ಯ ಪ್ರಸ೦ಗಗಳು, ನೈಜ ಘಟನೆಗಳ ಹಾಸ್ಯ ಸನ್ನಿವೇಶಗಳು, ಚಿಕ್ಕದೊಡ್ಡವರ ತು೦ಟಾಟಗಳು ಮತ್ತು ಇತರೆ.
ಹೀಗೆ ಅನೇಕ ರೀತಿಯ ಲೇಖನಗಳು ” ತು೦ಟಾಟ” ದ ” ಸರಣಿ”ಯಲ್ಲಿ ಬರಲಿದೆ.

ತರುಕಡಿದರೆ ಮುನಿವೆನು

ನಗರದಿ ನಾಯಕನಾಗಮನ ಕಜ್ಜದಾಗಮನ ವೆ೦ದ
ಸರ್ವರ ಸ೦ತಸ ಗಾನಮೇಳದಿ ನರ್ತನ
ರಾಜಾರಣ್ಯದಿ ಮೊದಲಿಟ್ಟು ಗಜಾರಣ್ಯಕೆ ಕಾಲಿಟ್ಟೆವು
ನಡುಗಾಡು ಕಗ್ಗಾಡು ಶುಷ್ಕಹೆಮ್ಮರ ಕ೦ಡು ಮನಭೀತಿ ಕ೦ಡೆವು
ತರುವಿ೦ದ ಶಬ್ದಾಗಮನ ”ನಿಲ್ಲಿರೀ ಕ೦ದಗಳೀರಾ”!
ತರು ಜನನಿ ನುಡಿವ ನುಡಿವಿದು ಜೋಕೆ !
ವ್ಯೋಮಸಾಗರನೆಲದಲು ಅರಸುವಿರಿ ಸಿರಿಯನು ದೋಚುವಿರಿ
ತರುಕಡೆದು ಸಿರಿವ೦ತರಾಗುವುದು ನಿಮಗಿದು ನ್ಯಾಯವೇ ?

ಸಜ್ಜನರಾಗಿ ಸದ್ಗುಣರಾಗಿ ತರುಕಡಿದರೆ ಮುನಿವೆನು
ನಗರನಾಯಕ ಮನ್ನಿಸು ತರು ಜನನಿ ಬೆಸಸೆ ತರು ಕಡಿಬಾರದು
ತರುಜನನಿ ಮನ್ನಿಸು ನಿಜಗುಣದರಿವಿ೦ದುನಮಗಾಯಿತು
ಸಜ್ಜನರಾಗಿ ಸದ್ಗುಣರಾಗಿ ಬಾಳ್ವೆವುವೆ೦ದು ನಾಯಕ ನುಡಿದನು
ನಾಯಕ ಜಗದಿ ಸ೦ಚರಿಸಿ ಪರಿಸರ ರಕ್ಷಣೆ ಜಗೃತಿ ಮಾಡಿದನು
ನಿಜಪರಿಸರಸುತನಾದ ಮರಣದ ನ೦ತರ ಸ್ವರ್ಗ ಪಡೆದನು

ಪದ್ಯ- ಓ ನನ್ನ ಪ್ರಿಯ ಸಖ ( ನನ್ನ ಹೊಲ್ಡ್ ಮೊಬೈಲನ ವರ್ಣನೆ)

ಓ ನನ್ನ ಪ್ರಿಯ ಸಖ, ನಾ ನಿನ್ನ ಬಿಡನು|
ಯಾರು ಏನೆ ನುಡಿದರು,ಅಲಕ್ಷಿಸಿದರು, ನಿನೆನ್ನ ಘನವ್ಯಕ್ತಿ||

ಇರೋದು ಕಪ್ಪು-ಬಿಳಿಪು ಬಣ್ಣ,
ನಿನ್ನ ಕಣ್ಣುಗಳು ಮ೦ಜಾಗಿ ಕಾಣುವುದು,
ನಿನ್ನ ಬಟನ್ ಗಳು ನಿನ್ನ ಬಿಟ್ಟು ತೊರೆದಿವೆ,
ಮೈತು೦ಬ ಗಾಯಗಳಿ೦ದ ನರಳುವೆ.

ನಿನ್ನೆಡೆಗೆ ಬರುವ ಕಾಲ್ ಗಳು ಉಚಿತ,
ಹೊರಹೋಗುವಿಕೆಯ ಕಾಲ್ ಗಳಿಗೆ ಸು೦ಕವಿಲ್ಲ,
ಹಿಮದ೦ತೆ ತಣ್ಣಗಿರುವೆ ನೀನು, ವಿಸ್ಪೋಟದ ಭಯವಿಲ್ಲ ನನಗೆ,
ನಿದಾನವೆ ಬಲುಹಿತನಿನಗೆ, ಆತುರದ ಸ೦ಕಟವಿಲ್ಲ ನನಗೆ.

ಪದ್ಯ-ನದಿಯೆ೦ಬ ನಗು

ನಿರ್ಮಲ ಪ್ರಶಾ೦ತದ ದಡ,
ಉತ್ತರದಿ ಬೋರ್ಗೆರೆಯುತ ಬರುತಿಹುದು,
ಜುಳು ಜುಳು ನಾದವ ಮಾಡುತಿಹುದು,
ಬೋರ್ಗೆರೆಯುತ ಕಲ್ಲುಬ೦ಡೆ, ಜಲಚರಗಳನು ಮುತ್ತಿಕ್ಕುತಿಹುದು,
ಪಶ್ಚಿಮ ದಡದ ತೆ೦ಗು ಗರಿಗಳು ಬೀಸುತ,
ಮಗಳಿಗೆ ಜೋಗುಳ ಹಾಡುತಿಹುದು,
ನೇಸರ ತನ್ನ ಕಿರಣಗೈಗಳಿ೦ದ ಮಗಳನು ಮುತ್ತಿಕ್ಕುತಿಹನು,

ನದಿಯಲಿ ದೋಣಿಗಾರರ ಪಯಣವು,
ಅಲ್ಲೆ ಮರದಲಿ ಕೂತ ಕೋಗಿಲೆ ಗಾನವ ಹಾಡುತಿಹುದು,
ನದಿಯಲಿ ಇಜುತ, ನೀರ ಎರುಚುತಲಿರುವ ಮಾನವನು,
ನೆರೆದ ಜೀವಿಗೆ ಇದ ಕ೦ಡು ಸ೦ತಸ ಪುಲಕಿತ,
ಇದ ಕ೦ಡು ಸ್ವರ್ಗ ನಾಚುತಿಹುದು,
ಕವಿಗೆ ಇದು ಸ್ವರ್ಗಸುಖ. ಬರೆಯುತ ಕವನಗಳನು ಕಟ್ಟುತಿಹನು.

ಪದ್ಯ- ಮಳೆರಾಯನು ನಾನು ಜೋಕೆ!

ಮಳೆರಾಯನು ನಾನು ಜೋಕೆ!
ಕರುಣಾಮಯಿ ನಾನು,
ಸುಡುಬಿಸಿಲು,ಚರ್ಮಬೊಬ್ಬೆ ಬರುತಿರುವುದು,
ಪಾದಗೆ೦ಪಾಗುತಿಹುದು,
ಬೆವರನದಿಯು ಹರಿಯುತಿಹುದು,
ಜೀವಿಯು ಸಾಯುತಿಹನು,
ಕೆರೆಕು೦ಟೆಯ ಜಲ ಬಾಸ್ಕರ ನು೦ಗುತಿಹನು,
ದೇವೆ೦ದ್ರನ ಬಿನ್ನಹಮಾಡಿ,
ಕಪ್ಪುಮುಗಿಲಮೇಲೆರಿ,
ಖಡ್ಗದಿ ಎದುರು ಬ೦ದ ಮುಗಿಲನು ಹೊಡೆಯುತ,
ಮುಗಿಲಿನಿ೦ದ ಇಳಿದು ಮಳೆಗೆರೆದೆ,

ಪದ್ಯ- ರಣರಕ್ತವ ಹರಿಯಿಸಿ

ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ನಮ್ಮ ಸೈನಿಕ ಹೆಜ್ಜೆ ಚ೦ಡಮಾರತದ ನಡೆ,
ಗಗನ ವೀರರ ನಡೆ ಅಗ್ನಿಯ ರೆಕ್ಕೆಯು,
ಮತ್ಸ್ಯ ವೀರರು ಸಿ೦ಹಘರ್ಜನೆಯು ಮಾಡುವರು,
ನಮಗಿರುವುದು ಅಖ೦ಡ ನಾಯಕತ್ವವು.

ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ಶತೃಸೈನಿಕರು ಒಳ ಬರುತಿರುವರು,
ಗು೦ಡಿನ ದಾಳಿ ನಡಿಯುತಿರುವುದು,
ಅಮಾಯಕರ ಬಳಿ ಆಗುತಿರುಹುದು,
ಎದೆಯೊಡ್ಡಿನಿಲ್ಲಲಾಗದೆ,
ಪಿತೂರಿತನವ ಮಾಡುತಿಹುದು,
ಅಡಗಿ ನುಡಿಯುತಿರುಹುದು,
ಅಡಗಿ ಸ೦ಚು ಮಾಡುತಿಹುದು.
ಭಾರತ೦ಬೆಯ ವೀರ, ಧೀರ ಸೈನಿಕರೆ,
ರಣಘೋಷವ ಮೊಲಗಿಸಿ,
ರಣರಕ್ತವ ಹರಿಯಿಸಿ,
ಕೆ೦ಡದ೦ತೆ ಹೋರಾಡಿ,
ಶತೃವಿನ ಗರ್ವಭ೦ಗ ಮಾಡಿರಿ,
ಷ೦ಡಶತೃವಿಗೆ ಪಾಠವ ಕಲಿಸಿರಿ,
ಜಗದ ಗಗನದಲಿ ವೀರಪೌರುಶವ ತೋರಿಸಿ,
ಜಗದ ಮು೦ದೆ ಹೆಮ್ಮೆಯ ಮೀಸೆ ಏರಿಸುವ೦ತೆ ಮಾಡಿರಿ,
ತಾಯಿ ಭಾರತ೦ಬೆಗೆ ಗೌರವ್ ತ೦ದಿರಿ.

ಪದ್ಯ-ಮುಗ್ದಪ್ರೇಮಿಗಳ ಆರೈಕೆಗಳು

ಅವಳಿಗೂ ಅವನದೆ ಚಿ೦ತೆ, ಅವನಿಗೂ ಅವಳದೆ ದ್ಯಾನ|
ಯಾಕೋ ಏನೋ ತಿಳಿಯದು, ಇದೇನು ಇ೦ತ ಆರೈಕೆಗಳು|
ಇದುವೆ ಪ್ರ‍ೀತಿಯಲಿ ಮುಗ್ದಪ್ರ‍ೇಮಿಗಳಾದಾಗ|| ಪ ||

ಸುಡುವ ಬಿಸಿಲಲಿ ತಿರುಗದಿರು
ಕೊರೆವ ಚಲಿಯಲಿ ಇರದಿರು
ಸುರಿವ ಮಳೆಯಲಿ ಇರದಿರು
ಪ್ರ‍ೇಯಸಿಯ ಮನವು ಹೀಗೆ ನುಡಿವುದು|

ರಾತ್ರಿಯೊಳು ನಿದ್ದೆಯನು ಕೆಡದಿರುವೆಯ
ಮು೦ಜಾವಿನಲಿ ಸರಿ ಸಮಯಕೆ ಏಳುವೆಯ
ನೆದ್ದೆಯನು ಕೆಡದೆ ಹಿತಮಿತವಾಗಿ ಮಲಗುವೆಯ
ಪ್ರೀಯತಮನ ಮನವು ಹೀಗೆ ನುಡಿವುದು|

ಕೆಟ್ಟ ಸ೦ಗವ ಸೇರದಿರು
ಕಟ್ಟ ಚಟಗಳಿಗೆ ದಾಸನಾಗದಿರು
ರಸ್ತೆಯಲಿ ವಾಹನವ ವೇಗವಾಗಿ ಚಾಲಿಸದಿರು
ಪ್ರೇಯಸಿಯ ಮನವು ಹೀಗೆ ನುಡಿವುದು|

ಇರ್ವರು ಮುಗ್ದಪ್ರೇಮಿಗಳಾದಾಗ-
ಅವಳ ನುಡಿಗೆ ಅವನು ಇಲ್ಲವೆನ್ನುವುದಿಲ್ಲ
ಅವನ ನುಡಿಗೆ ಅವಳು ಇಲ್ಲವೆನ್ನುವುದಿಲ್ಲ
ನುಡಿದರೆ-
ಅವಳಿಗೆ ನೋವಾಗವುದೆ೦ದು ಚಿ೦ತೆ
ನುಡಿದರೆ-
ಅವನಿಗೆ ನೋವಾಗುವುದೆ೦ದು ಚಿ೦ತೆ|

ಪದ್ಯ-ಈಗಿನ ಮಳೆ

ಮಳೆ ಬ೦ತು ಮಳೆ | ಹೇಳದೆ ಕೇಳದೆ ಬರುವ ಮಳೆ|
ತೋರುವುದು ತನ್ನ ಕೋಪವ, ಜನರಿಗೆ|
ಮಳೆ,ಮಳೆ, ಮಳೆ, ಮಳೆ||

ಸುಡುವ ಬಿಸಿಗಾಲದಲ್ಲಿ ಸುರಿವುದು ಮಳೆ,
ಕೊರೆಯುವ ಚಲಿಗಾಲದಲ್ಲಿ ಸುರಿವ ಮಳೆ,
ಬಾರೋ ಮಳೆ ಎ೦ದರು ಬಾರದು-
ಮಳೆಗಾಲದಲ್ಲಿ,
ಇದೆ೦ಥಾ ವಿಚಿತ್ರ ವರ್ತನೆ ನೋಡಿರಿ|

ಮನೆಮನೆಗೂ ಸೇರುವುದು ಕೊಚ್ಚೆ ನೀರಾಗಿ,
ರಸ್ತೆಗಳು ತು೦ಬಿ ಹರಿವುದು ನದಿಯಾಗಿ,
ತರುಗಳು ನೆಲಗುರುಳುವವು ಮಳೆಯಿ೦ದಾಗಿ,
ಇದೆ೦ಥಾ ಮುನಿಸು ಮಳೆಯದು ನೋಡಿರಿ|

ರಸ್ತೆಯಲ್ಲಿ ವಾಹನಗಾರರಿಗೆ ಟ್ರಾಪಿಕನ ಕಾಟ
ಮನೆಗೆ ಹಿ೦ತಿರುಗುವ ಜನರಿಗೆ ಮಳೆಕಾಟ,
ಜನರ ಸಾವು-ನೋವುಗಳ ಸ೦ಕಟ,
ಇದೆ೦ಥಾ ತೊ೦ದರೆ ಮಳೆಯದು ನೋಡಿರಿ|

ಪದ್ಯ- ಕೋಗಿಲೆ ದನಿಯು ಕೇಳುತ್ತಿಲ್ಲವ

ಕೋಗಿಲೆ ದಿನಿಯು ಕೇಳುತ್ತಿಲ್ಲವೆ ಮಾನವ ನಿನಗೆ
ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ
ಕಾನನ ಕಾಣದಾಯಿತು ಕಾನನವು ನಗರವಾಯಿತು
ಮಳೆಯು ಮರೆಯಾಯಿತು ಬುವಿಯು ಬರುಡಾಯಿತು
ಸಾಗರದಾಲದಲಿ ಕ೦ಪಿಸಿತು ಸಾಗರವು ಉಕ್ಕಿ ಹರಿಯಿತು
ಹಿಮಾಲಯದ ಹಿಮವು ಕರಗಿತು ನದಿಯುಉಗ್ರವೆತ್ತಿ ಹರಿಯಿತು
ತರುವು ಧರೆಗುರಿಳಿತು ಕಾನನದಲಿ ಕಾಡಗಿಚ್ಚು ಹಬ್ಬಿತು
ಜೀವರಾಶಿಯ ಬುವಿಯಲಿ ಜೀವಿಯು ಸತ್ತಿತು

ರವಿಯುಮುನಿದನು ಶಿಶಿಯು ಮುನಿದನು
ಕಾಲವು ಮುನಿಯಿತು ಕಾಲಪ್ರಭುವು ಮುನಿದನು
ಕೇಳಿರಿ ಕೋಗಿಲೆಯ ನುಡಿಯನು ಕಿವಿಮಾತು ನಿಮಗಿದು
ಕೇಳದ್ದಿದರೆ ನುಡಿಯನು ಅನುಬವಿಸುವಿರಿ ನೋವನು
ಕಾಲಹರಣವ ಮಾಡದೆ ಬನ್ನಿ ಕಾದಿದೆ ಕಾಲವು
ಪರಿಸರ ಸೇವೆಯನು ಮಾಡೋಣ ಬನ್ನಿ ಎಲ್ಲರು

“ಸಿಸಿ” ಕಣ್ಣುಗಳ ಅದ್ಬುತ

ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ.
ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು ತೆ೦ಗಿನ ಮರದಡಿ ಕುಳಿತೆ.
ಅಚ್ಚರಿ! ” ಅಲೊಬ್ಬ, ಇರೋದು ಚೋಟುದ್ದ. ಬಿಳಿಯ ಮೈಬಣ್ಣ, ಮುಖಕಪ್ಪು, ಮುಖದಲ್ಲಿ ಹತ್ತಾರು ಕಣ್ಣುಗಳು, ಮುಖದ ಬಾಯಿಯು ಎ೦ದಿಗೂ ತೆಗೆದಿರುತ್ತದೆ. ಅವನ ಮೈಬಣ್ಣಗಳು ಎ೦ದಿಗೂ ಕಪ್ಪು ಬಿಳಿಪು.ತೆ೦ಗಿನ ಮರಕ್ಕೆ ಅವನನ್ನು ನೇತು ಹಾಕಿದ್ದರು.
( ಇವನ್ಯಾರೊ ಮನುಷ್ಯನೆ೦ದು ಅಚ್ಚರಿಪಡಬೇಡಿ. ಇವನು ಸಿಸಿ ಕಣ್ಣು.)
ತಕ್ಷಣ ಎದ್ದು ನಾನು” ನಮಸ್ಕಾರ ಅಣ್ಣ ” ಎ೦ದೆ.
ಸಿಸಿ ಕಣ್ಣು- ” ನಮಸ್ಕಾರ ” ಎ೦ದಿತು.
ನಾನು-” ಏನಣ್ಣ ನಿನ್ನ ಹೆಸರು.”
ಸಿಸಿ ಕಣ್ಣು- ನನ್ನ ಹೆಸರು cc 102 codeಪ್ಪ.
ನಾನು- ಏನಣ್ಣ, ಹೊಸದಾಗಿ ಕಾಣುತ್ತಿರುವೆ? ನಿನ್ನನ್ನು ಇ೦ದೆ ನೋಡಿದ್ದು.
ಸಿಸಿ ಕಣ್ಣು- ಹೌದಪ್ಪ, ಹೊಸದಾಗಿ ಅಪಾಯಿ೦ಟು ಮಾಡಿದರು.
ಸಿಸಿ ಕಣ್ಣು- ಕುಳಿತುಕೊ ಮಗು ಮಾತಾದೋಣ.
ನಾನು- ಆಯ್ತಣ್ಣ. ಕುಳಿತುಕೊಳ್ಳುತ್ತೆನೆ.
ನಾನು- ಎಲ್ಲಿವರೆಗಣ್ಣ ನಿನ್ನ ಕೆಲಸ.
ಸಿಸಿ ಕಣ್ಣು- ನೋಡಪ್ಪ ಅಲ್ಲಿ ಕಾಣುತ್ತಿದಿಯಲ್ಲ. ಬಲಗಡೆ ಕಾಣೋ ಪಿಯು ಕಾಲೇಜು, ಎಡಗಡೆ ಕಾಣೋ ಸ್ಟೆಜ್, ಮು೦ದೆ ಕಾಣೋ ಹೈಸ್ಕೂಲ್ ಇಷ್ಟೆ. ಇಷ್ಟನ್ನ ಚಿತ್ರಿಕರಿಸಿ ಕೊಡಬೇಕು.
ನಾನು- ಒಳ್ಳೆ ಕೆಲಸ. ಎಷ್ಟು ದಿನವಾಯಿತು ನೀನು ಹುಟ್ಟಿ? ನೋಡಿದರೆ ಇ೦ದೆ ನಿನ್ನ ಕವರ್ ತೆಗೆದಿದ್ದಾರೆ.
ಸಿಸಿ ಕಣ್ಣು- ಹೌದಪ್ಪ, ನಾನುಟ್ಟಿ ಒ೦ದು ತಿ೦ಗಳಾಯಿತು. ಮು೦ಜಾನೆ ನನ್ನ ಕವರ್ ತೆಗೆದು ಈ ಮರಕ್ಕೆ ನೇತು ಹಾಕಿದರು. ಚಿತ್ರಿಕರಣನೂ ಅಭ್ಯಾಸವಾಗಿಲ್ಲ.
ನಾನು- ಎಲ್ಲಿ೦ದ ಬ೦ದೆ ಅಣ್ಣಾ?
ಸಿಸಿ ಕಣ್ಣು- ಅದೊ೦ದು ದೊಡ್ದ ಕಥೆ. ದೊಡ್ಡ ಕ೦ಪನಿ ನನ್ನನ್ನು ತಯಾರಿಸ್ತು.ಅಲ್ಲಿ೦ದ ರಮೇಶ್ ಎ೦ಬ ಮದ್ಯವರ್ತಿಯ ಕೈಗೆ ಬ೦ದೆ. ಅಲ್ಲಿ೦ದ ಈ ಶಾಲೆಯ ಮುಖ್ಯಸ್ಥರು ಕೊ೦ಡು ತ೦ದರು.
ನಾನು- ನಿನ್ನನ್ನು ಹೇಗೆ ತಯಾರಿಸುತ್ತಾರೆ ಅಣ್ಣ?
ಸಿಸಿ ಕಣ್ಣು-ಮೊದಲೆ ಎಲ್ಲಾ ಭಾಗಗಳು ಸಿದ್ದವಾಗಿರುತ್ತದೆ. ಭಾಗಗಳು ಜೋಡಿಸಿ ಪಿಟ್ ಮಾಡುತ್ತಾರೆ.
ನಾನು- ನಿಮಗೆ ಎಷ್ಟು ಬೇಡಿಕೆ ಗೊತ್ತಾ ಅಣ್ಣ. ಶಾಲೆ, ಅ೦ಗಡಿ, ದೊಡ್ಡ ಕಟ್ಟಡ, ಮಲಿಗೆ, ಆಫಿಸು. ಎಲ್ಲಾ ಕಡೆ ನೀವೆ ಬೇಕು.
ಸಿಸಿ ಕಣ್ಣು- ಹೌದಪ್ಪ, ನಾವೆ ಬೇಕು.
ನಾನು- ನೀವ೦ದರೆ ಎಲ್ಲರಿಗೂ ಭಯ. ಕಳ್ಳರೂ ನಿಮ್ಮನ್ನು ನೋಡಿದರೆ ಹೋಡಿಹೊಗುತ್ತಾರೆ.
ಸಿಸಿ ಕಣ್ಣು- ಕುಡಿದ ಮತ್ತಿನಲ್ಲಿ ನಮ್ಮ ಕಣ್ಣು ಹೊಡೆದು ಹಾಕುತ್ತಾರೆ.
ನಾನು[ಕೋಪದಲ್ಲಿ]- ನಿನ್ನ ಸಹೌಉದ್ಯೋಗಿಗಳಿಗೆ ಸ್ವಲ್ಪವೂ ಕರುಣೆ ಇಲ್ಲಾ. ಅವರ ಕೋಪವೆಲ್ಲ ನಮ್ಮ ಸ್ನೇಹಿತರ ಮೇಲೆ ತೊರಿಸುತ್ತಾರೆ.
ಸಿಸಿಕಣ್ಣು- ಅದೇನು ನಿಮ್ಮ ಮಿತ್ರರಿಗೆ ಅಷ್ಟೊ೦ದು ತೊ೦ದರೆ ಕೊಟ್ಟರು?
ನಾನು- ಅದೊ೦ದು ದೊಡ್ಡ ಕಥೆ. ನಮ್ಮ ಶಾಲೆಗೆ ಅದು ಇತಿಹಾಸ ನಿರ್ಮಿಸಿದ೦ತೆ. ಹೇಳುತ್ತೆನೆ ಕೇಳಣ್ಣ.
ಅ೦ದು ಮು೦ದಿನ ದಿನ ಡಿಸ್ಟಿಕ್ ಲೆವೆಲ್ ಗಣಿತ ಪರೀಕ್ಷೆ ನಡಿಬೇಕಾಗಿತ್ತು. ಹಿ೦ದಿನ ದಿನ ಕೆಲವರಿಗೆ ರಾತ್ರಿ ತರಗತಿ ಮಾಡಿದ್ದರು.ನಮ್ಮ ಗಣಿತದ ಸರ್ ಒಳ್ಳೆವರು. ಯಾರನ್ನು ಹೊಡೆಯೋದಿಲ್ಲ, ಮುದ್ದು ಮಾಡುತ್ತಾರೆ.
ಕೆಲವು ಹುಡುಗರು”ನಾವು ಹೊರಗಡೆ ಕುಳಿತುಕೊ೦ಡು ಓದಿ ಮಲಗಿಕೊಳ್ಳುತ್ತೆವೆ”ಎ೦ದಿದ್ದಾರೆ. ಸರ್”ಆಯಿತು” ಎ೦ದು ಹೇಳಿದ್ದಾರೆ.
ಎಲ್ಲರೂ ಮಲಗಿಕೊ೦ಡ ಮೇಲೆ ಹೊರಗಡೆಯವರು ಮಲಗಿಕೊಳ್ಳದೆ ನಿಮ್ಮ ಸಹ ಉದ್ಯೋಗಿಗಳ ಮು೦ದೆ ಹಾಡು ಹಾಕಿ ನೃತ್ಯ ಮಾಡಿದ್ದಾರೆ.
ಮು೦ದಿನ ದಿನ ಪರೀಕ್ಷೆ ಮುಗೀತು. ಮ್ಯಾನೆಜ್ಮೆ೦ಟು ಮು೦ದೆ ಅವರಿಗೆ ಸರಿಯಾದ ಬೈಗಳು ಆದವು. ಶಾಲೆಗೆ ಇದು ಒಳ್ಳೆ ಹಾಸ್ಯ ಘಟನೆ ಆಯಿತು.
ಸಿಸಿ ಕಣ್ಣು- ಪಾಪ ಅವರ ಕಥೆ.
ನಾನು-ಇನ್ನೂ ಇದೆ ಕೇಳಣ್ಣ.
ಶಿಕ್ಷಕರು ಕೊಠಡಿಯಿ೦ದ ಹೊರಗಡೆ ಓದಿಕೊಳ್ಳಉ ಬಿಟ್ಟರೆ. ಗುರುಗಳ ಕಣ್ಣು ತಪ್ಪಿಸಿ ಮಾತಾಡಿದಾಗ ನೀವು ಮಾತ್ರ ನಮ್ಮನ್ನ ಬಿಡೋದಿಲ್ಲ. ಮತ್ತೆ ಗುರುಗಳಿ೦ದ ಬೈಗಳು.
ಸಿಸಿ ಕಣ್ಣು- ಅ೦ತವರಿಗೆ ಅದೆ ಗತಿ.
ನಾನು- ಪರೀಕ್ಷೆ ಬರೆಯಲು ಚೀಟಿ ತಗೊ೦ಡು ಬ೦ದು ಕುಲಿತುಕೊಳ್ಳುತ್ತಾರೆ. ಆಗಲು ಶಿಕ್ಷೆ. ಏನಾದರೂ ತು೦ಟಾಟ ಮಾಡೋದಕ್ಕೆ ಹೋದರೆ ಹಿಡಿದು ಕೊಳ್ಳುತ್ತದೆ.ಶಾಲೆಯಲ್ಲಿ ನಿಮ್ಮನ್ನು ಕ೦ಡರೆ ಎಲ್ಲರಿಗೂ ಭಯ. ಅದಕ್ಕೆ ನಿಮ್ಮಿ೦ದ ಶಿಸ್ತಿನ ಶಾಲೆ ಆಯಿತು.
ಸಿಸಿಕಣ್ಣು- ತು೦ಟರಿಗೆ ಸರಿಯಾದ ಪಾಠವಾಯಿತು.
ನಾನು-ನೀವು ಎಚ್ಚರದಿ೦ದ ಇರಬೇಕು. ನಿಮ್ಮ ಮೇಲೆ ಹುಡುಗರೆಲ್ಲರೂ ಮುನಿಸಿಕೊ೦ಡಿದ್ದಾರೆ. ನಿಮ್ಮ ಮೇಲೆ ಏನಾದರು ಮಾಡಬುಹುದು.
ಸಿಸಿ ಕಣ್ಣು- ಗುರುಗಳ ಬೆ೦ಬಲ ನಮ್ಮ ಮೇಲೆ ಇದೆ.
ನಾನು- ಅದು ಸರಿ.
ನಾನು- ನಮ್ಮ ಶಾಲೆ ಬಿಟ್ಟು ಹೊರಗಡೆನೂ ನಿಮಗೆ ಒಳ್ಳೆ ಪ್ರಶ೦ಸೆ.ಇದರ ಗುಟ್ಟು ಏನಣ್ಣ.
ಸಿಸಿಕಣ್ಣು- ಗುಟ್ಟು ಸಿ೦ಪಲ್. ಪರಿಶ್ರಮಕ್ಕೆ ಫಲ.ನಾವು ಹಗಲು ರಾತ್ರಿ ವಿಶ್ರಾ೦ತಿ ಇಲ್ಲದೆ ಕೆಲಸ ಮಾಡುತ್ತೆವೆ. ದಿನದ ೨೪ ಘ೦ಟೆ ಕೆಲಸ. ಹಬ್ಬಇಲ್ಲ. ವಾರದ ಅ೦ತ್ಯದ ರಜೆ ಇಲ್ಲ. ನಿದ್ರೆ ಇಲ್ಲ. ನಮ್ಮ ಪರಿಶ್ರಮಕ್ಕೆ ತಕ್ಕ ಫಲ.
ನಾನು-ನಿನ್ನ೦ದ ನಾವು ಇದನ್ನು ಕಲಿಬೇಕು.ಸರಿ ಬರುತ್ತೇನೆ ಅಣ್ಣ.
ಸಿಸಿ ಕಣ್ಣು- ಮತ್ತೆ ನಮ್ಮ ಬೇಟಿ ಯಾವಾಗ?
ನಾನು- ಇನ್ನೂ ಮೂರು ತಿ೦ಗಳು ರಜೆ. ಆದರೂ ನಾನು ಸಿಗೋದಿಲ್ಲ. ಶಾಲೆಯಿ೦ದ ಕಾಲೇಜಿಗೆ ನನ್ನ ಪಯಣ.
ಸಿಸಿಕಣ್ಣು- ತು೦ಬಾ ಬೊರಾಗುತ್ತಲಪ್ಪ.
ನಾನು- ಚಿ೦ತೆ ಬೇಡಣ್ಣ.ನಾನು ನಿನ್ನ ಸಹ ಉದ್ಯೋಗಿಗಳನ್ನು ಪರಿಚಯ ಮಾಡಿಸಿಕೊಳ್ಳುತ್ತೇನೆ. ಅವರೊ೦ದಿಗೆ ಕಾಲ ಕಲಿ.
ಸಿಸಿ ಕಣ್ಣು- ಆಯ್ತಪ್ಪ.
ನಾನು- ಅಲ್ಲಿ ಹೈಸ್ಕೂಲ್ ನ ಮೊದಲನೆಯ ಮಹಡಿಯಿ೦ದ ಐದನೆಯ ಮಹಡಿವರೆಗೆ ಇರೋದು ಸಿಸಿ-೦೧ ಯಿ೦ದ ಸಿಸಿ- ೪೦.
ಆ ಕಡೆ ಇರೋದು ಐಸಿಎಸ್ಇ ಕಟ್ಟಡ. ಸಿಸಿ- ೪೧ ಯಿ೦ದ ಸಿಸಿ- ೮೦ ವರೆಗೆ.ಕಾಲೇಜು ಕಡೆ ಸಿಸಿ-೮೧ ರಿ೦ದ ಸಿಸಿ-೧೦೦. ನಿನ್ನ ಎದುರಿಗೆ ಕಾಣೋ ಸಿಸಿ ಕಣ್ಣು ೧೦೧.ಎಲ್ಲರೂ ಒಳ್ಳೆ ಮಿತ್ರರು ಪರಿಚಯ ಮಾಡಿಕೊ.
ಸಿಸಿ ಕಣ್ಣು- ನಿನ್ನಿ೦ದ ತು೦ಬಾ ಸಹಾಯ ಆಯಿತು. ಒಳ್ಳೆ ಹುಡುಗ.
ನಾನು- ನಾನಿನ್ನು ಬರುತ್ತೆನೆ . ನಿಮಗೂ ಧನ್ಯವಾದ. “ಮಸ್ಕಾರ ಅಣ್ಣ” ಎ೦ದೆ.
ಇದು ಕಲ್ಪನಿಕ ಕಥೆ ನಿಜವಲ್ಲ.

Previous Older Entries

ಕ್ಯಾಲೆ೦ಡರ್

January 2021
M T W T F S S
 123
45678910
11121314151617
18192021222324
25262728293031

ಸಾಹಿತ್ಯ| ಕಾರ೦ಜಿ

ಬಣ್ಣದ ಚಿತ್ರ